‘ಸಂರಕ್ಷಾ’ – ತಲಸ್ಸೆಮಿಯಾ ಮಕ್ಕಳ ಆರೈಕೆ ಕೇಂದ್ರ

ಮಕ್ಕಳಲ್ಲಿ ಹುಟ್ಟುವಾಗಲೇ ಇರುವ ಆನುವಂಶಿಕ ನ್ಯೂನತೆಯಾದ ತಲಸ್ಸೆಮಿಯಾ ಬಾಧಿತ ಮಗುವಿನ ದೇಹದಲ್ಲಿ ಹಿಮೊಗ್ಲೋಬಿನ್ ಯುಕ್ತ ಗುಣಮಟ್ಟದ ರಕ್ತದ ಉತ್ಪತ್ತಿಯಾಗುವುದಿಲ್ಲ. ಇಂತಹ ಮಕ್ಕಳು ಉಲ್ಲಾಸದಿಂದಿರಲು ನಿರಂತರ ರಕ್ತಪೂರಣ ಅನಿವಾರ್ಯ. ಈ ನ್ಯೂನತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಗೂ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ 2013ರಲ್ಲಿ  ‘ಸಂರಕ್ಷಾ’ – ತಲಸ್ಸೆಮಿಯಾ ಮಕ್ಕಳ ಆರೈಕೆ ಕೇಂದ್ರವನ್ನು ತೆರೆಯಲಾಗಿದೆ.

  • ಮಕ್ಕಳಿಗೆ ತಪಾಸಣೆಗೆ ಒಳಪಟ್ಟ ಉತ್ತಮ ಗುಣಮಟ್ಟದ ರಕ್ತವನ್ನು ನೀಡಲಾಗುತ್ತಿದೆ.
  • ರಕ್ತತಪಾಸಣೆ, ರಕ್ತಪೂರಣ ಮಾಡುವುದಲ್ಲದೇ ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ಬಿ-ಕಾಂಪ್ಲೆಕ್ಸ್ ಮತ್ತು ಮಲ್ಟಿ ವಿಟಮಿನ್ ಮುಂತಾದ ಅಗತ್ಯ ಔಷಧಗಳನ್ನು ಅವರ ಆರ್ಥಿಕ ಸ್ಥಿತಿಗತಿಯನ್ನು ಗಮನಿಸದೇ ಎಲ್ಲರಿಗೂ ಉಚಿತವಾಗಿ ನೀಡಲಾಗುತ್ತಿದೆ.

ಸಂರಕ್ಷಾದ 2021-22ನೇ ಸಾಲಿನ ಅಂಕಿಅಂಶ:

  • ಆರೈಕೆ ಪಡೆಯುತ್ತಿರುವ ಮಕ್ಕಳು – 406
  • ಹೊಸದಾಗಿ ನೋಂದಾಯಿತ ಮಕ್ಕಳು – 35
  • ಈ ಮಕ್ಕಳಿಗೆ ನೀಡಲಾದ ಒಟ್ಟು ರಕ್ತದ ಯುನಿಟ್ – 7,682

ಉಪಲಬ್ಧಿ

  • ಸಂರಕ್ಷಾದಲ್ಲಿ ಶುಶ್ರೂಷೆ ಪಡೆಯುತ್ತಿರುವ ಬಹುತೇಕ ಎಲ್ಲ ಮಕ್ಕಳಲ್ಲಿ ಇದೀಗ ಆರೋಗ್ಯದಲ್ಲಿ ಸ್ಥಿರತೆ ಕಂಡುಬರುತ್ತಿದೆ. ಅವರ ಎತ್ತರ ಹಾಗೂ ತೂಕದಲ್ಲೂ ಸುಧಾರಣೆಯಾಗಿದೆ. ಉತ್ತಮ ಗುಣಮಟ್ಟದ ಪರೀಕ್ಷಿತ ರಕ್ತವನ್ನು ನೀಡುತ್ತಿರುವುದರಿಂದ ಮಕ್ಕಳಲ್ಲಿ ಹಿಮೊಗ್ಲೋಬಿನ್ ಪ್ರಮಾಣ ಹೆಚ್ಚಾಗಿದೆ.
  • ಪರಿಣಾಮವಾಗಿ ಪಿತ್ತಜನಕಾಂಗ (Liver) ಮತ್ತು ಗುಲ್ಮ (Spleen)ಗಳ ಗಾತ್ರದಲ್ಲಿ ಸುಧಾರಣೆಯಾಗುತ್ತಿದೆ.
  • ಉಚಿತವಾಗಿ Hydroxyurea ಚಿಕಿತ್ಸೆ ನೀಡಲಾಗುತ್ತಿದ್ದು, ಇದರಿಂದ ರಕ್ತಪೂರಣದ ನಡುವಿನ ಅವಧಿಯು ಹೆಚ್ಚಿದೆ. ಇದರಿಂದ ಮಕ್ಕಳ ದೇಹದಲ್ಲಿ Iron Overload ಕಡಿಮೆಯಾಗಿ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ.
  • Sickle Cell ರೋಗಿಗಳಿಗೆ ಕೂಡ Hydroxyurea ನೀಡಲಾಗುತ್ತಿದೆ. ಅದರಿಂದ ಅವರು ನೋವಿಲ್ಲದೇ ಸಹಜ ಜೀವನವನ್ನು ನಡೆಸಲು ಸಾಧ್ಯವಾಗುತ್ತಿದೆ.
  • ಪೋಷಕರು ತಮ್ಮ ಮಕ್ಕಳ ಬಗ್ಗೆ ಅಗತ್ಯ ಕಾಳಜಿ ವಹಿಸುತ್ತಿದ್ದಾರೆ. ಮಕ್ಕಳು ಶಾಲೆಗೆ ಹೋಗಲು ಆರಂಭಿಸಿದ್ದಾರೆ. ಶಾಲೆ ಮತ್ತು ಮನೆಯಲ್ಲಿ ಅವರ ಸಾಧನೆ ಮತ್ತು ನಡವಳಿಕೆ ಉತ್ತಮಗೊಂಡಿದೆ.