Blood is a key fuel to run the turbine of life without friction. Blood is the bedrock for a sound physical and mental health and blood donation is a noble deed to save life! Blood donation boosts the health of both the donor and the patient and nurtures a healthy society. Rashtrotthana Parishat ventured Rashtrotthana Blood Centre and Samraksha initiative with this social concern of providing quality blood during health emergencies and today has evolved as a flagship blood centre in the state. The working mechanism of a blood centre encapsulates a complex process and it is imperative to know the functioning of a blood centre as a noble civilian!

A Front View of Rashtrotthana Blood Centre, Bengaluru

Blood is a key fuel to run the turbine of life without friction. Blood stream is a lighthouse to the human body that pilots a person in his voyage of a healthy life. Blood is the bedrock for a sound physical and mental health. Austrian philosopher Viktor Schauberger compares blood to water and proclaims that, as normal functions of nature are fulfilled by water similarly blood provides many important functions for mankind.

Blood donation is a noble act. It’s indeed a splendid deed to donate blood for those who are battling for life. The world is prone to various unforeseen contingencies and health emergencies. The patients require continuous blood transfusion for a prolonged duration. The donated blood can be preserved for a short span of 35 days. Thus, consolidating fresh and healthy blood is the prime goal and a herculean task for a blood centre.

There is no alternative to blood and it cannot be manufactured artificially. Hence, blood donation is imperative and it is of course a noble duty of a healthy person to donate blood in the process of nurturing a healthy and disease-free world. The donated blood starts to regenerate in the donor’s body minutes after donation and the donated blood will be replaced in the body by volume within 48 hours.

Benefits of Blood Donation:

  • The blood donation stimulates generation of new blood in the human body which in turn enhances one’s memory, productivity and efficiency of doing tasks.
  • Regular Blood donation helps a person to reduce the chances of heart attack, high blood pressure and reduces the cholesterol content in human body
  • The lifespan of Red Blood Corpuscles (RBC) is 120 days. Nearly 2 million RBC in our body die every second. But, it is replaced by new RBC. Hence, the donated RBC will be regenerated within 3-4 weeks of blood donation. The RBC which is abundant in us, but has a short life and also has the capacity to regenerate can be donated to save a life instead of thwarting. This also boosts the health of a donor.
Rashtrotthana Blood Centre, Bengaluru

The Rashtrotthana Parishat which is working towards creating a healthy and sustainable society with a vision of ‘Swastha-Susthira Samajanirmanam’ ventured Rashtrotthana Blood centre on 30th May, 1993 with a social concern of providing quality blood to the needy people during health emergencies, which has evolved as a flagship blood centre in the state today.

The Rashtrotthana Blood Centre, equipped with state-of-the-art amenities operates 24*7. In order to render high-quality blood to the patients, the blood centre is facilitated with SDP (Single Donor Platelets), CLIA, Automated Blood Grouping and Crossmatching Machine and other modern technologies.

 

The intermediate phase that operates between blood donation and blood transfusion is complex. The working mechanisms of a blood centre can be encapsulated in the following way:

Pioneering Blood Camps

  • The blood donation camps are organised across the state in association with non-governmental organisations and other enterprises or any social institution with social concern
  • Various social institutions in the broad spectrum, NGOs such as Lions Club, Rotary Club, Corporates such as Infosys, Oracle, Volvo, Educational institutions such as Sai Engineering College, PESIT, RVCE have scaled up with Rashtrotthana Parishat in its noble cause.
  • The blood donation camps are organised in well-ventilated and hygienic spaces. The necessary medical equipment, beds etc. are arranged by the blood centre itself.
  • The details of the donor are registered and sent for preliminary medical check-up are done.
  • Donor’s blood group, haemoglobin level, blood pressure etc. are done and confirm whether the donor is eligible for blood donation.
  • Approximately 350 camps are organised every year. During the initial days of the blood centre the total donors were 1900. At present, annual collection is 30,000-35,000 donors.

Consolidation of Blood

Ground eligibility for blood donation

  • The donor should be of sound health.
  • The age limit for a donor should be 18-60 years (If a regular donor, then 65 years).
  • The weight of the donor should be 45kgs and above.
  • The Haemoglobin count must be more than 12.5 grams%.
  • The donor should have a stable blood pressure.
  • A healthy man and woman can donate blood every 3 and 4 months once respectively.

Who shouldn’t donate blood?

  • People suffering from anaemia, cancer, tuberculosis, high blood pressure, epilepsy, liver, kidney and heart related disorders.
  • Women during menstruation, pregnancy and lactation.
  • Those who have undergone surgery cannot donate blood up to a year.

Multi-faceted verification of blood:

The blood of the donor will be examined to detect the possibilities of being infected from HIV, HBV, HCV, Syphilis and Malaria. Rashtrotthana blood centre is efficient at testing 92 blood samples simultaneously for disease detection. It is equipped to test 48 blood samples simultaneously to detect the blood group. Thus, blood is given to the donor only after multi-level cross verification and authentication.

Segregation of blood components

Multi-faceted Blood Verification Unit
  • The blood taken from the donor and the necessary components are separated from the whole blood. This process and setup is called ‘Component separation Unit’. Rashtrotthana Blood Centre acquired this unit on November 04, 2004.
  • The necessary components of blood such as SDP, Plasmapheresis etc. can be collected automatically with the aid of machineries. This system was adopted in 2015.
  • In 2004, the aggregate capacity to segregate blood was 24 units. Today, it has spiked to 48 units.
  • The Packed Red Blood Cells, FFP, Cryoprecipitate and Platelet concentrates have to be separated under predetermined temperature and the process has to be completed within 6-8 hours of collection of blood.
  • The life of Platelets and Cryoprecipitate is 5 days. Hence, these components will be separated depending upon the demand from patients.
  • To separate packed cells and FFP through a double bag the temperature must be 4℃. To separate Packed Cells, FFP and Platelets/Cryoprecipitate through a triple bag the temperature must be 22-24℃. In this process the centrifuge and speed is also crucial.
  • The segregated packed cells and whole blood has to be stored in a specialised blood centre refrigerator under 2-6℃. Cryoprecipitate and plasma has to be stored in -18℃ or even below it. The platelets have to be preserved at room temperature.
Saline Blood Washing Unit
Refrigerated Centrifuge Unit

Cross Matching of the Blood of Donor and Patient 

  • The blood contains four components such as PRBC, FFP, Cryoprecipitate, Platelets. Based upon the requirement of the patient and the prescription by the doctor the necessary component will be given to the patient. To initiate this process, blood sample of the patient is collected.
  • The patient’s blood sample and the donor’s sample are cross verified at various levels.
  • The name on the patient’s blood sample, name on the blood requisition letter, the IP numbers has to be equated. If there is any error in this equation, such a blood sample will be rejected.
  • The blood sample of the patient will be centrifuged and plasma is separated from it. Later, the blood cells of the donor are added to the blood sample of the patient. It is again centrifuged by keeping in incubation.
  • After surpassing all these stages of verification and testing, if the blood of donor and patient matches, then the blood is rendered for transfusion.
  • The above process is a testimony for how complex the blood centre functioning is!
  • Yet, Rashtrotthana Blood Centre is functioning as the most successful blood centre of the nation with utmost efficiency, credibility and quality service. During the initial days of the blood centre there were 1,900 donors annually. Today, the blood centre has an ocean of donors who have joined hands in its noble cause, with 30,000-35,000 donors annually. The blood centre is foresighted to reach the goal of 40,000 donors in near future.
A view of the Blood Cross Matching Section

Samraksha: A Saviour against Disorder

Thalassemia is an inherited genetic disorder wherein a child’s body is unable to generate efficient quantity of Red Blood Corpuscles (RBC) and haemoglobin. To maintain a healthy and stable life Thalassemia affected kids need frequent blood transfusion. But, numerous underprivileged families will not be financially stable to give treatment to their children. In this pretext, Samraksha initiative of Rashtrotthana Blood Centre is a boon to Thalassemia Patients.

Rashtrotthana Parishat started Thalassemia-Day Care Centre in 2013, with the motto of no child should die due to Thalassemia. Currently there are 400 Thalassemia patients who are treated under Samraksha initiative. Patients arrive from 30 districts of Karnataka and also from 8 other states of India such as West Bengal, Orissa, Bihar, Maharashtra, Telangana, Andhra Pradesh, Tamil Nadu.

Blood Transfusion for Thalassemia Patients

The high quality, multi-level cross verified blood is transfused to Thalassemia affected kids. The blood centre not just gives free blood transfusion but renders various medicines such as Folic acid, Calcium, B-complex and multivitamin tablets at free of cost. Apart from medicines and blood transfusion, the Thalassemia affected children and their family are given counselling and guidance. There are play areas, library etc. to keep the kids engaged in fruitful activities and keep them mentally calm during prolonged duration of blood transfusion. There is also refreshment and boarding facilities for accompanies of the patients as they arrive from far off places. The seeds of service and generosity that were sown decades ago, are yielding the fruits today, to thousands of thalassemia victims and other patients today who need blood. Numerous people are protected under the shade of Rashtrotthana Blood Centre. The innocent and pure smile on the face of patients in the aftermath of blood transfusion is a catalyst to march on in this selfless service, enlightening and blooming the life of lakhs of people.

Rashtrotthana Blood Centre
Kempegowda Nagar, Bengaluru – 560 004
Ph: 080-2660 8870, 29747870, 99452 99369
Email: [email protected]
www.bloodcentre.rashtrotthana.org

—–

ಬದುಕು ಬೆಳಗಿಸುವ ‘ಜೀವಧಾಮ’ : ರಾಷ್ಟ್ರೋತ್ಥಾನ ರಕ್ತಕೇಂದ್ರ

ರಾಷ್ಟ್ರೋತ್ಥಾನ ರಕ್ತಕೇಂದ್ರವೆಂಬ ವಿಶಾಲ ಮರವನ್ನು ಆಶ್ರಯಿಸಿ ಸಾವಿರಾರು ಮಂದಿ ಬದುಕಿನ ಚೈತನ್ಯವನ್ನು ಪಡೆದಿದ್ದಾರೆ. ರಾಷ್ಟ್ರೋತ್ಥಾನ ಪರಿಷತ್ ಸಾಮಾಜಿಕ ಕಳಕಳಿಯಿಂದ ಬಿತ್ತಿದ ಪುಟ್ಟ ಬೀಜ ವಿಶಾಲ ಮರವಾಗಿ ಬೆಳೆಯುತ್ತ ಅಶಕ್ತರಿಗೆ, ಅಸಹಾಯಕರಿಗೆ ನೆರಳಾಗುತ್ತಿದೆ. ರಾಷ್ಟ್ರೋತ್ಥಾನ ರಕ್ತಕೇಂದ್ರ ಮತ್ತು ಸಂರಕ್ಷಾ ಯೋಜನೆಗಳು ಅತಿ ಹೆಚ್ಚು ಜನರಿಗೆ ತಲುಪುವ ಮೂಲಕ ಇನ್ನಷ್ಟು ಸಮಾಜಹಿತ ಕಾರ್ಯಗಳು ನೆರವೇರಲಿ, ರಾಷ್ಟ್ರೋತ್ಥಾನದ ಸೇವಾಕಾರ್ಯಗಳು ಮತ್ತಷ್ಟು ವಿಶಾಲವಾಗಿ, ‘ಸ್ವಸ್ಥ-ಸುಸ್ಥಿರ ಸಮಾಜನಿರ್ಮಾಣ’ದ ಧ್ಯೇಯ ಸಾಕಾರಗೊಳ್ಳಲಿ.

ರಾಷ್ಟ್ರೋತ್ಥಾನ ರಕ್ತಕೇಂದ್ರ, ಬೆಂಗಳೂರು

ರಕ್ತದಾನವೇ ಶ್ರೇಷ್ಠ ದಾನ ಎಂಬ ಮಾತಿದೆ. ಜೀವನ್ಮರಣದ ಹೋರಾಟದಲ್ಲಿರುವವರಿಗೆ ರಕ್ತದಾನದ ಮೂಲಕ ಬದುಕು ನೀಡುವುದು ಅತ್ಯಂತ ಪುಣ್ಯತಮ ಕಾರ್ಯ. ಪ್ರಪಂಚದಲ್ಲಿ ಅಪಘಾತಗಳು, ತುರ್ತು ಚಿಕಿತ್ಸೆಯ ಸಂದರ್ಭಗಳು ನಿರಂತರವಾಗಿ ಎದುರಾಗುತ್ತಲೇ ಇರುತ್ತವೆ. ಕ್ಯಾನ್ಸರ್, ತಲಸ್ಸೆಮಿಯಾ, ಹಿಮೋಫಿಲಿಯಾದಂತಹ ರೋಗಗಳಿಗೆ ತುತ್ತಾದವರು ರಕ್ತದಾನಿಗಳನ್ನೇ ಅವಲಂಬಿಸಿರುತ್ತಾರೆ. ಒಮ್ಮೆ ದಾನಿಗಳಿಂದ ಶೇಖರಿಸಿದ ರಕ್ತ 35 ದಿನಗಳ ಕಾಲ ಮಾತ್ರ ರಕ್ತಪೂರಣಕ್ಕೆ ಯೋಗ್ಯವಾಗಿರುವುದರಿಂದ ಹಾಗೂ ಉತ್ತಮ ಆರೋಗ್ಯಕ್ಕಾಗಿ ತಾಜಾ ರಕ್ತಕ್ಕೆ ಹೆಚ್ಚಿನ ಪ್ರಾಶಸ್ತ್ಯವಿರುವುದರಿಂದ, ದಾನಿಗಳು ನಿರಂತರವಾಗಿ ರಕ್ತದಾನ ಮಾಡಿದಲ್ಲಿ ಮಾತ್ರ ಅವಶ್ಯಕತೆ ಇರುವವರಿಗೆ ಸಕಾಲಕ್ಕೆ ರಕ್ತ ನೀಡಿ ಜೀವ ಉಳಿಸಲು ಸಾಧ್ಯವಾಗುತ್ತದೆ.

ವ್ಯಕ್ತಿಯ ಉಳಿವಿನಲ್ಲಿ ರಕ್ತದ ಪಾತ್ರ ಅತ್ಯಂತ ಮಹತ್ತ್ವದ್ದಾಗಿದೆ. ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ, ಅದನ್ನು ಕೃತಕವಾಗಿ ಉತ್ಪಾದಿಸುವುದೂ ಸಾಧ್ಯವಿಲ್ಲ. ರಕ್ತವನ್ನು ಮನುಷ್ಯರು ದಾನ ಮಾಡಿದರೆ ಮಾತ್ರ ಪಡೆಯಬಹುದಾದದ್ದರಿಂದ ರಕ್ತದಾನ ಮಾಡುವುದು ಪ್ರತಿ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಿ ಆಗಾಗ ರಕ್ತದಾನ ಮಾಡಿದರೆ ಮಾತ್ರ ರೋಗಗ್ರಸ್ತರನ್ನು, ಗಾಯಗೊಂಡವರನ್ನು ಬದುಕಿಸಲು ಸಾಧ್ಯ. ರಕ್ತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ದಾನಿಯ ದೇಹದಲ್ಲಿ ರಕ್ತದ ಉತ್ಪತ್ತಿ ಪ್ರಾರಂಭವಾಗಿ, 24 ಗಂಟೆಯ ಒಳಗಾಗಿ ದಾನ ಮಾಡಿದ ಪ್ರಮಾಣದ ರಕ್ತ ದೇಹದಲ್ಲಿ ಪುನರುತ್ಪತ್ತಿಯಾಗುತ್ತದೆ. ಒಂದೆರಡು ವಾರಗಳಲ್ಲಿ ರಕ್ತದ ಎಲ್ಲ ಅಂಶಗಳು ದಾನಿಯ ರಕ್ತದಲ್ಲಿ ಸೇರಿಕೊಳ್ಳುತ್ತವೆ.

ರಕ್ತದಾನ ಮಾಡುವುದರಿಂದ ದಾನಿಗೂ ಸಹ ಹಲವು ರೀತಿಯ ಪ್ರಯೋಜನಗಳಾಗುತ್ತವೆ. ರಕ್ತದಾನದಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗಿ, ಅದರಿಂದ ಕಾರ್ಯತತ್ಪರತೆ, ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ. ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು, ಹೃದಯಾಘಾತವನ್ನು ತಡೆಗಟ್ಟಲು ಮತ್ತು ರಕ್ತದೊತ್ತಡದಂತಹ ಇತರ ಕೆಲವು ರೋಗಗಳನ್ನು ದೂರವಿರಿಸಲು ರಕ್ತದಾನ ಸಹಾಯ ಮಾಡುತ್ತದೆ. ಪ್ರತಿಯೊಂದು ಕೆಂಪು ರಕ್ತಕಣವು ನಮ್ಮ ದೇಹದಲ್ಲಿ ಸುಮಾರು 120 ದಿನಗಳು ಜೀವಂತವಾಗಿರುತ್ತದೆ. ದೇಹದಲ್ಲಿರುವ ಸುಮಾರು 2 ಮಿಲಿಯನ್ ರಕ್ತಕಣಗಳು ಪ್ರತಿ ಸೆಕೆಂಡ್‍ಗೆ ಸಾಯುತ್ತಿರುತ್ತವೆ. ಆದರೆ ಸತ್ತ ಕಣಗಳ ಬದಲಿಗೆ ಹೊಸ ಕಣಗಳು ಯಾವಾಗಲೂ ಹುಟ್ಟುತ್ತಿರುತ್ತವೆ. ಅಲ್ಲದೇ, ರಕ್ತದಾನ ಮಾಡಿದಾಗ ನಮಗೆ ಕಡಿಮೆಯಾದ ಕೆಂಪು ರಕ್ತಕಣಗಳು 3 ರಿಂದ 4 ವಾರಗಳಲ್ಲಿ ಮರುಪೂರಣಗೊಳ್ಳುತ್ತವೆ. ಹಾಗಾಗಿ ನಮ್ಮ ದೇಹದಲ್ಲಿಯೇ ರಕ್ತಕಣಗಳು ಸಾಯುವ ಬದಲು ಅಗತ್ಯವಿರುವವರಿಗೆ ದಾನ ಮಾಡಿದರೆ ಇನ್ನೊಂದು ಜೀವವನ್ನೂ ಉಳಿಸಿದಂತಾಗುತ್ತದೆ; ನಮ್ಮ ಆರೋಗ್ಯವೂ ವೃದ್ಧಿಯಾಗುತ್ತದೆ.

ಸ್ವಾಗತ ಕಾರ್ಯಾಲಯ

‘ಸ್ವಸ್ಥ-ಸುಸ್ಥಿರ ಸಮಾಜನಿರ್ಮಾಣ’ದ ಧ್ಯೇಯದೊಂದಿಗೆ ಹೆಜ್ಜೆಯಿಡುತ್ತಿರುವ ರಾಷ್ಟ್ರೋತ್ಥಾನ ಪರಿಷತ್, ರಕ್ತದ ಅಗತ್ಯ ಇರುವವರಿಗೆ ಸಮಯಕ್ಕೆ ಸರಿಯಾಗಿ ರಕ್ತ ಸಿಗಬೇಕು ಮತ್ತು ಯಾವುದೇ ವ್ಯಕ್ತಿ ಬರಿಗೈಯಲ್ಲಿ ಹಿಂದಿರುಗಬಾರದು ಎಂಬ ಸಾಮಾಜಿಕ ಕಳಕಳಿಯಿಂದ 1993ರ ಮೇ 30ರಂದು ‘ರಾಷ್ಟ್ರೋತ್ಥಾನ ರಕ್ತಕೇಂದ್ರ’ವನ್ನು ಆರಂಭಿಸಿದೆ.

ಸುಸಜ್ಜಿತ ವಾಹನಗಳು, ಸಲಕರಣೆಗಳು ಸೇರಿದಂತೆ ರಕ್ತದಾನ ಶಿಬಿರ ನಡೆಸಲು ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನು ಹೊಂದಿರುವ ರಾಷ್ಟ್ರೋತ್ಥಾನ ರಕ್ತಕೇಂದ್ರವು ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುತ್ತಿದೆ. ರೋಗಿಗಳಿಗೆ ಗುಣಮಟ್ಟದ ರಕ್ತನೀಡುವುದಕ್ಕಾಗಿ ಆಧುನಿಕ ತಂತ್ರಜ್ಞಾನಗಳಾದ SDP (Single Donor Platelets), CLIA, Automated Blood Grouping and Crossmatching ಯಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ.

ರಕ್ತಕೇಂದ್ರದ ನಿರ್ವಹಣೆ, ಮತ್ತದರ ಕಾರ್ಯವಿಧಾನಗಳು ಅತ್ಯಂತ ಸಂಕೀರ್ಣವಾಗಿವೆ. ಅದರ ವಿವಿಧ ಹಂತಗಳ ಸಂಕ್ಷಿಪ್ತ ಪರಿಚಯವನ್ನು ಈ ರೀತಿಯಾಗಿ ಮಾಡಬಹುದು.

ರಕ್ತದಾನ ಶಿಬಿರಗಳ ಆಯೋಜನೆ

  • ಸಾಮಾಜಿಕ ಕಳಕಳಿಯುಳ್ಳ ಸ್ವಯಂಸೇವಾಸಂಸ್ಥೆಗಳು, ಕಂಪನಿಗಳು ಹಾಗೂ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ರಾಜ್ಯದ ವಿವಿಧೆಡೆ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ನಡೆಸಿ ರಕ್ತವನ್ನು ಸಂಗ್ರಹಿಸಲಾಗುತ್ತದೆ.
  • ಲಯನ್ಸ್ ಕ್ಲಬ್, ರೋಟರಿ ಕ್ಲಬ್‌ನಂತಹ ಸಂಘ-ಸಂಸ್ಥೆಗಳು, ಫಿಲಿಪ್ಸ್, ವಿಪ್ರೊ, ಇನ್ಫೋಸಿಸ್, ಒರಾಕಲ್, ವೋಲ್ವೊ ಇತ್ಯಾದಿ ಕಂಪನಿಗಳು, ಸಾಯಿ ಎಂಜಿನಿಯರಿಂಗ್ ಕಾಲೇಜು, ಅಲ್ಫಾ ಎಂಜಿನಿಯರಿಂಗ್ ಕಾಲೇಜು, ಪೆಸಿಟ್ ಕಾಲೇಜು ಸೇರಿದಂತೆ ನಾನಾ ಶಿಕ್ಷಣ ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಿವೆ.
  • ಗಾಳಿ, ಬೆಳಕು ಸಮೃದ್ಧವಾಗಿರುವ, ಸ್ವಚ್ಛವಾಗಿರುವ ಜಾಗದಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ರಾಷ್ಟ್ರೋತ್ಥಾನ ರಕ್ತಕೇಂದ್ರದ ವತಿಯಿಂದಲೇ ಅಗತ್ಯ ವೈದ್ಯಕೀಯ ಸಲಕರಣೆಗಳು, ಹಾಸಿಗೆ ಮುಂತಾದ ವ್ಯವಸ್ಥೆಗಳನ್ನು ಮಾಡಿಕೊಂಡು ನಿಗದಿತ ಸಮಯಕ್ಕಿಂತ ಮೊದಲೇ ಸ್ಥಳಕ್ಕೆ ತೆರಳಿ ಶಿಬಿರದ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ.
  • ದಾನಿಯು ಸಿದ್ಧನಾದ ಬಳಿಕ ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಮುಗಿಸಿ ಆತನನ್ನು ವೈದ್ಯರ ಬಳಿ ಕಳಿಸಲಾಗುತ್ತದೆ.
  • ವೈದ್ಯರು ಆತನ ರಕ್ತದ ಗುಂಪು, ಹಿಮೋಗ್ಲೋಬಿನ್, ರಕ್ತದೊತ್ತಡ ಇತ್ಯಾದಿಗಳನ್ನು ಪರೀಕ್ಷಿಸಿದ ನಂತರ ಆತ ರಕ್ತದಾನಕ್ಕೆ ಯೋಗ್ಯ ಎಂಬುದು ಖಚಿತವಾದ ಮೇಲೆ ರಕ್ತವನ್ನು ಪಡೆದುಕೊಳ್ಳಲಾಗುತ್ತದೆ.
  • ಈ ರೀತಿಯಾಗಿ ವರ್ಷಕ್ಕೆ ಸರಿಸುಮಾರು 350 ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಪ್ರಾರಂಭದ ವರ್ಷದಲ್ಲಿ ಸುಮಾರು 1,900 ದಾನಿಗಳಿಂದ ರಕ್ತ ಸಂಗ್ರಹವಾಯಿತು. ಆಮೇಲೆ ಹಂತ ಹಂತವಾಗಿ ಬೆಳೆದು ಈಗ ವರ್ಷಕ್ಕೆ ಸುಮಾರು 30-35 ಸಾವಿರ ದಾನಿಗಳಿಂದ ರಕ್ತಸಂಗ್ರಹವಾಗುತ್ತಿದೆ.

ರಕ್ತ ಸಂಗ್ರಹಣೆ

ರಕ್ತದಾನಕ್ಕೆ ಕನಿಷ್ಠ ಅರ್ಹತೆಗಳು

  • ವ್ಯಕ್ತಿ ಆರೋಗ್ಯವಂತನಾಗಿರಬೇಕು
  • ವಯಸ್ಸು 18 ರಿಂದ ಹೆಚ್ಚಿರಬೇಕು ಮತ್ತು 65 ವರ್ಷ ಮೀರಿರಬಾರದು
  • 45 ಕೆ. ಜಿ. ಅಥವಾ ಅದಕ್ಕಿಂತ ಹೆಚ್ಚು ತೂಕವಿರಬೇಕು
  • 12.5 ಗ್ರಾಂಗಿಂತಲೂ ಹೆಚ್ಚು ಹಿಮೊಗ್ಲೋಬಿನ್ ಅಂಶವಿರಬೇಕು
  • ದಾನಿಯ ರಕ್ತದೊತ್ತಡ ಸಮಸ್ಥಿತಿಯಲ್ಲಿರಬೇಕು
  • ಆರೋಗ್ಯವಂತ ಪುರುಷರು ಪ್ರತಿ 3 ತಿಂಗಳಿಗೊಮ್ಮೆ ಹಾಗೂ ಮಹಿಳೆಯರು ಪ್ರತಿ 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.

ಯಾರು ರಕ್ತದಾನ ಮಾಡಬಾರದು?

  • ರಕ್ತಹೀನತೆ, ಕ್ಯಾನ್ಸರ್, ಕ್ಷಯ, ಅಧಿಕ ರಕ್ತದೊತ್ತಡ, ಅಪಸ್ಮಾರ, ಲಿವರ್, ಮೂತ್ರಪಿಂಡ, ಹೃದಯ ಸಂಬಂಧಿ ಇತ್ಯಾದಿ ಕಾಯಿಲೆಗಳಿಂದ ಬಳಲುತ್ತಿರುವವರು.
  • ಋತುಸ್ರಾವದಲ್ಲಿರುವ ಮಹಿಳೆಯರು, ಗರ್ಭಿಣಿಯರು, ಮಗುವಿಗೆ ಹಾಲುಣಿಸುವ ತಾಯಂದಿರು.
  • ಶಸ್ತ್ರಚಿಕಿತ್ಸೆಗೆ ಒಳಗಾದವರು ಒಂದು ವರ್ಷದವರೆಗೆ, ಮಲೇರಿಯಾ, ಟೈಫಾಯ್ಡ್, ಜಾಂಡೀಸ್‌ನಿಂದ ಬಳಲಿದವರು, ಯಾವುದೇ ಕಾಯಿಲೆಯ ವಿರುದ್ಧ ಲಸಿಕೆಗಳನ್ನು ತೆಗೆದುಕೊಂಡವರು, ಹಚ್ಚೆ ಹಾಕಿಸಿಕೊಂಡವರು ಮುಂದಿನ ಆರು ತಿಂಗಳವರೆಗೆ ರಕ್ತದಾನ ಮಾಡಬಾರದು.

ದಾನಿಯ ರಕ್ತವನ್ನು ಪರೀಕ್ಷಿಸಿ ಆತನಲ್ಲಿರಬಹುದಾದ HIV, HBV, HCV, Syphilis, Malaria ರೋಗಗಳ ಪತ್ತೆಹಚ್ಚಲಾಗುತ್ತದೆ. ರಕ್ತಕೇಂದ್ರವು ಒಂದು ಸಮಯಕ್ಕೆ 92 ರಕ್ತದ ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಏಕಕಾಲಕ್ಕೆ 48 ರಕ್ತದ ಮಾದರಿಗಳ ಗುಂಪನ್ನು ಸಹ ಗುರುತಿಸಬಹುದಾಗಿದೆ. ದಾನಿಯ ರಕ್ತವು ಎಲ್ಲ ವಿಧಗಳಲ್ಲಿ ರಕ್ತಪೂರಣಕ್ಕೆ ಯೋಗ್ಯ ಎಂಬುದು ಖಚಿತವಾದಮೇಲೆ ಆತನಿಂದ ರಕ್ತವನ್ನು ಸಂಗ್ರಹಿಸಲಾಗುತ್ತದೆ.

ರಕ್ತಕಣಗಳ ಬೇರ್ಪಡಿಸುವಿಕೆ

ಕೋಲ್ಡ್ ಸ್ಟೋರೇಜ್
  • ದಾನಿಯಿಂದ ರಕ್ತವನ್ನು ತೆಗೆದುಕೊಂಡು ಆ ರಕ್ತದಿಂದ ನಮಗೆ ಬೇಕಾದ ಅಂಶಗಳನ್ನು ಮಾತ್ರ ಪ್ರತ್ಯೇಕಿಸುವ ಘಟಕವನ್ನು ‘Component Separation Unit’ ಎಂದು ಕರೆಯುತ್ತಾರೆ. ಈ ಘಟಕವನ್ನು 2004ರ ನವೆಂಬರ್ 4ರಂದು ಅಳವಡಿಸಿಕೊಳ್ಳಲಾಗಿದೆ.
  • ದಾನಿಯಿಂದ ರಕ್ತವನ್ನು ಪಡೆದುಕೊಂಡು ಯಂತ್ರದಲ್ಲಿಯೇ ಆತನ ರಕ್ತದ ಅಂಶಗಳನ್ನು ಬೇರ್ಪಡಿಸಿ, ಅಗತ್ಯವಿರುವ SDP, Plasmapheresisಗಳಂತಹ ಅಂಶಗಳನ್ನು ಸಂಗ್ರಹಿಸಲಾಗುತ್ತದೆ. ಈ ವ್ಯವಸ್ಥೆಯನ್ನು 2015ರಲ್ಲಿ ಅಳವಡಿಸಿಕೊಳ್ಳಲಾಗಿದೆ.
  • 2004ರಲ್ಲಿ ಏಕಕಾಲಕ್ಕೆ 24 Unit ರಕ್ತದ ಅಂಶಗಳನ್ನು ಬೇರ್ಪಡಿಸುವ ಸಾಮರ್ಥ್ಯವಿತ್ತು. ಆದರೆ ಈಗ ಆ ಸಾಮರ್ಥ್ಯ 48 unit.
  • ರಕ್ತದಿಂದ Packed Red Blood Cells, FFP, Cryoprecipitate ಮತ್ತು Platelet Concentrates ಎಂಬ ನಾಲ್ಕು ಅಂಶಗಳನ್ನು ಪ್ರತ್ಯೇಕಿಸಲಾಗುತ್ತದೆ. ಈ ಪ್ರಕ್ರಿಯೆಯು ನಿರ್ದಿಷ್ಟ ತಾಪಮಾನದಲ್ಲಿ, ರಕ್ತವನ್ನು ಸಂಗ್ರಹಿಸಿದ 6-8 ಗಂಟೆಗಳ ಅವಧಿಯಲ್ಲಿ ಮುಗಿಯಬೇಕು.
  • Platelets ಮತ್ತು Cryoprecipitateಗಳ ಆಯಸ್ಸು ಕೇವಲ 5 ದಿನಗಳಷ್ಟು ಕಡಿಮೆಯಿರುವುದರಿಂದ ರೋಗಿಗಳಿಂದ ಬೇಡಿಕೆಯಿದ್ದಲ್ಲಿ ಮಾತ್ರ ಇವುಗಳನ್ನು ಪ್ರತ್ಯೇಕಿಸಲಾಗುತ್ತದೆ.
  • Packed Cells ಮತ್ತು FFPಗಳನ್ನು Double Bag ನ ಮೂಲಕ ಬೇರ್ಪಡಿಸಲು 4 ಡಿಗ್ರೀ ಸೆಲ್ಸಿಯಸ್ ತಾಪಮಾನವಿರಬೇಕು. Packed Cells, FFP ಮತ್ತು Platelets/ Cryoprecipitateಗಳನ್ನು Triple Bag ಬಳಸಿ ಪ್ರತ್ಯೇಕಿಸಲು 22-24 ಡಿಗ್ರೀ ಸೆಲ್ಸಿಯಸ್ ತಾಪಮಾನವಿರಬೇಕು. ಈ ಹಂತದಲ್ಲಿ ಸೆಂಟ್ರಿಫ್ಯೂಜ್ ಮತ್ತು ಅದರ ವೇಗವೂ ಮುಖ್ಯವಾಗುತ್ತದೆ.
  • ಪ್ರತ್ಯೇಕಿಸಲ್ಪಟ್ಟ ಅಂಶಗಳಲ್ಲಿ Packed Cells ಮತ್ತು Whole Blood ಗಳನ್ನು 2-6 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ Blood Bank refrigerator ನಲ್ಲಿಯೇ ಶೇಖರಿಸಿಡಬೇಕು. Cryoprecipitate ಮತ್ತು ಪ್ಲಾಸ್ಮಾವನ್ನು -18 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತಲೂ ಕಡಿಮೆ ತಾಪಮಾನದಲ್ಲಿ ಶೇಖರಿಸಬೇಕು. Plateletಗಳನ್ನು ಕೊಠಡಿ ತಾಪಮಾನದಲ್ಲಿ ಶೇಖರಿಸಬೇಕು.

ರೋಗಿ ಮತ್ತು ದಾನಿಯ ರಕ್ತದ ಹೊಂದಾಣಿಕೆ

  • ರಕ್ತದಲ್ಲಿ PRBC, FFP, Cryoprecipitate, Plateletsಗಳಂತಹ ಒಟ್ಟು 4 ತರಹದ ಅಂಶಗಳಿರುತ್ತವೆ. ಆ ಐದರಲ್ಲಿ ರೋಗಿಗೆ ಅಗತ್ಯವಿರುವ ಅಂಶವನ್ನು ಕೇಳಿ ತಿಳಿದು, ವೈದ್ಯರಿಂದ ಕೋರಿಕೆ ಪತ್ರ ಮತ್ತು ರೋಗಿಯ ರಕ್ತದ ಮಾದರಿಯನ್ನು ಸಂಗ್ರಹಿಸಲಾಗುತ್ತದೆ.
  • ರೋಗಿಯ ರಕ್ತದ ಮಾದರಿ ಮತ್ತು ದಾನಿಯಿಂದ ಪಡೆದ ರಕ್ತದ ಅಂಶಗಳ ಹೊಂದಾಣಿಕೆಯನ್ನು ವಿವಿಧ ಹಂತಗಳಲ್ಲಿ ಪರೀಕ್ಷಿಸಲಾಗುತ್ತದೆ.
  • ರೋಗಿಯ ರಕ್ತದ ಮಾದರಿಯ ಮೇಲಿರುವ ಹೆಸರು, ಕೋರಿಕೆ ಪತ್ರದ ಮೇಲಿರುವ ಹೆಸರು, IP ನಂಬರ್ ಗಳು ಸರಿಯಿವೆಯೇ ಎಂಬುದನ್ನು ಮೊದಲು ಖಾತ್ರಿ ಮಾಡಿಕೊಳ್ಳಬೇಕು. ಈ ಯಾವುದರಲ್ಲಿ ವ್ಯತ್ಯಾಸವಿದ್ದರೂ ಆ ರಕ್ತದ ಮಾದರಿಯನ್ನು ನಿರಾಕರಿಸಲಾಗುತ್ತದೆ.
  • ರೋಗಿಯ ರಕ್ತದ ಮಾದರಿಯನ್ನು Centrifuge ಮಾಡಿ ಅದರಲ್ಲಿರುವ ಪ್ಲಾಸ್ಮಾವನ್ನು ಬೇರ್ಪಡಿಸಲಾಗುತ್ತದೆ. ಅನಂತರ ರೋಗಿಯ ರಕ್ತಕ್ಕೆ ದಾನಿಯ ರಕ್ತದ ಜೀವಕೋಶಗಳನ್ನು ಹಾಕಿ Incubationನಲ್ಲಿಟ್ಟು ಪುನಃ ಅದನ್ನು Centrifuge ಮಾಡಲಾಗುತ್ತದೆ.
  • ಅಂತಿಮವಾಗಿ ಈ ಹಂತದಲ್ಲಿ ರೋಗಿಯ ಮತ್ತು ದಾನಿಯ ರಕ್ತಕ್ಕೆ ಹೊಂದಾಣಿಕೆಯಾಗುತ್ತದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ರಕ್ತದ ಹೊಂದಾಣಿಕೆ ಖಚಿತವಾದಮೇಲೆ ಕೆಲವು ನಿರ್ದೇಶನಗಳನ್ನು ನೀಡಿ ರಕ್ತಪೂರಣಕ್ಕೆ ಕಳಿಸಿಕೊಡಲಾಗುತ್ತದೆ.

ಇಂತಹ ಸಂಕೀರ್ಣವಾದ ಕಾರ್ಯವಿಧಾನಗಳ ನಡುವೆಯೂ ರಾಷ್ಟ್ರೋತ್ಥಾನ ರಕ್ತಕೇಂದ್ರವು ಅತ್ಯಂತ ಕ್ಷಮತೆಯಿಂದ, ಗುಣಮಟ್ಟವನ್ನು ಕಾಯ್ದುಕೊಂಡು ಕಾರ್ಯನಿರ್ವಹಿಸುತ್ತಿದೆ. ರಕ್ತಕೇಂದ್ರ ಪ್ರಾರಂಭವಾದ ವರ್ಷ ಸುಮಾರು 1,900 ದಾನಿಗಳು ರಕ್ತದಾನ ಮಾಡಿದ್ದರು. ಆದರೆ ಹಂತ ಹಂತವಾಗಿ ಬೆಳೆಯುತ್ತ ಈಗ ವರ್ಷಕ್ಕೆ ಸರಿಸುಮಾರು 30 – 35 ಸಾವಿರ ದಾನಿಗಳಿಂದ ರಕ್ತ ಸಂಗ್ರಹವಾಗುತ್ತಿದೆ. ಮುಂಬರುವ ದಿನಗಳಲ್ಲಿ 40 ಸಾವಿರ ದಾನಿಗಳಿಂದ ರಕ್ತವನ್ನು ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ.

ಅಗಣಿತ ಜೀವಪೋಷಕ ಪ್ರವಾಹಸಂರಕ್ಷಾ

ಸಂರಕ್ಷಾ ವಿಭಾಗ

ಹುಟ್ಟುವಾಗಲೇ ಇರುವ ಆನುವಂಶಿಕ ನ್ಯೂನತೆಯಾದ ತಲಸ್ಸೆಮಿಯಾ ಬಾಧಿತ ಮಗುವಿನ ದೇಹದಲ್ಲಿ ಹಿಮೋಗ್ಲೋಬಿನ್ ಯುಕ್ತ ಆರೋಗ್ಯಕರ ಕೆಂಪುರಕ್ತಕಣಗಳ ಉತ್ಪತ್ತಿಯಾಗುವುದಿಲ್ಲ. ಇಂತಹ ಮಕ್ಕಳು ಆರೋಗ್ಯ ಮತ್ತು ಉಲ್ಲಾಸದಿಂದಿರಲು ನಿರಂತರ ರಕ್ತಪೂರಣ ಅನಿವಾರ್ಯ. ಈ ನ್ಯೂನತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಗೂ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ 2013ರಲ್ಲಿ ‘ಸಂರಕ್ಷಾ’ – ತಲಸ್ಸೆಮಿಯಾ ಮಕ್ಕಳ ಆರೈಕೆ ಕೇಂದ್ರವನ್ನು ತೆರೆಯಲಾಗಿದೆ.

ಪ್ರಸ್ತುತ ಸುಮಾರು 400 ತಲಸ್ಸೆಮಿಯಾ ಬಾಧಿತರು ಸಂರಕ್ಷಾದಲ್ಲಿ ಆರೈಕೆ ಪಡೆಯುತ್ತಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ 30 ಜಿಲ್ಲೆಗಳು ಹಾಗೂ ಪಶ್ಚಿಮಬಂಗಾಳ, ಒರಿಸ್ಸಾ, ಬಿಹಾರ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ 8 ರಾಜ್ಯಗಳಿಂದ ತಲಸ್ಸೆಮಿಯಾ ಪೀಡಿತರು ಆರೈಕೆಗಾಗಿ ‘ಸಂರಕ್ಷಾ’ಕ್ಕೆ ಬರುತ್ತಿದ್ದಾರೆ.

ಮಕ್ಕಳಿಗೆ ತಪಾಸಣೆಗೆ ಒಳಪಟ್ಟ ಗುಣಮಟ್ಟದ ರಕ್ತವನ್ನು ನೀಡಲಾಗುತ್ತಿದೆ. ರಕ್ತತಪಾಸಣೆ, ರಕ್ತಪೂರಣ ಮಾಡುವುದಲ್ಲದೇ ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ಬಿ-ಕಾಂಪ್ಲೆಕ್ಸ್ ಮತ್ತು ಮಲ್ಟಿ ವಿಟಮಿನ್ ಮುಂತಾದ ಅಗತ್ಯ ಪೂರಕ ಪೋಷಕಾಂಶಗಳನ್ನು ಅವರ ಆರ್ಥಿಕ ಸ್ಥಿತಿಗತಿಗಳನ್ನು ಗಣನೆಗೆ ತೆಗೆದುಕೊಳ್ಳದೇ ಎಲ್ಲರಿಗೂ ಉಚಿತವಾಗಿ ನೀಡಲಾಗುತ್ತಿದೆ. ತಲಸ್ಸೆಮಿಯಾ ಪೀಡಿತ ಮಕ್ಕಳಿಗೆ ಮಾತ್ರವಲ್ಲದೇ ಸಂಪೂರ್ಣ ಕುಟುಂಬಕ್ಕೆ ನಿರಂತರವಾಗಿ ಅಗತ್ಯ ಮಾರ್ಗದರ್ಶನ ನೀಡಲಾಗುತ್ತಿದೆ. ದೂರದ ಊರುಗಳಿಂದ ಬರುವ ಕುಟುಂಬಗಳಿಗೆ ಊಟ ಮತ್ತು ವಸತಿಯ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ.

ಹೀಗೆ ರಾಷ್ಟ್ರೋತ್ಥಾನ ಪರಿಷತ್ ಸಾಮಾಜಿಕ ಕಳಕಳಿಯಿಂದ ಬಿತ್ತಿದ ಪುಟ್ಟ ಬೀಜ ವಿಶಾಲ ಮರವಾಗಿ ಬೆಳೆಯುತ್ತ ಅಶಕ್ತರಿಗೆ, ಅಸಹಾಯಕರಿಗೆ ನೆರಳಾಗುತ್ತಿರುವುದು ಸಂತಸದ ಸಂಗತಿ. ರಾಷ್ಟ್ರೋತ್ಥಾನ ರಕ್ತಕೇಂದ್ರ ಮತ್ತು ಸಂರಕ್ಷಾ ಯೋಜನೆಗಳು ಅತಿ ಹೆಚ್ಚು ಜನರಿಗೆ ತಲುಪುವ ಮೂಲಕ ಇನ್ನಷ್ಟು ಸಮಾಜಹಿತ ಕಾರ್ಯಗಳು ನೆರವೇರಲಿ, ರಾಷ್ಟ್ರೋತ್ಥಾನದ ಸೇವಾಕಾರ್ಯಗಳು ಮತ್ತಷ್ಟು ವಿಶಾಲವಾಗಿ, ‘ಸ್ವಸ್ಥ-ಸುಸ್ಥಿರ ಸಮಾಜನಿರ್ಮಾಣ’ದ ಧ್ಯೇಯ ಸಾಕಾರಗೊಳ್ಳಲಿ ಎಂಬುದು ನಮ್ಮ ಆಶಯ.

ರಾಷ್ಟ್ರೋತ್ಥಾನ ರಕ್ತಕೇಂದ್ರ
ಕೆಂಪೇಗೌಡನಗರ, ಬೆಂಗಳೂರು – 560 004
Ph: 080-2660 8870, 29747870, 99452 99369
Email: [email protected]
www.bloodcentre.rashtrotthana.org